Wednesday, 6 April 2011

ಪರಿಸರ ಪ್ರೇಮಿ ಪಂಡಿತ ಮುಂಜಿ

       ಸಸ್ಯಂ ರಮ್ಯಂ ಸುಂದರಂ ಉಕ್ತಿಗೆ ಹಿಂದಿನ ಕಾಲದ ಪರಿಸರಕ್ಕೆ ಅನ್ವಯವಾಗುತ್ತಿತ್ತು .ಕಾಲಕಾಲಕ್ಕೆ    ಕಾಡು ಕ್ಷೀಣಿಸುತ್ತಿದೆ. ಇದರಿಂದ ಮುಂದೆ ಆಮ್ಲಜನಕದ ಬ್ಯಾಗನ್ನು ಹಿಡಿದು ನಡೆಯಬೇಕಾಗಬಹುದು ....!!
 ಪರಿಸರದ ಸಂರಕ್ಷಣೆ , ನಮ್ಮೆಲ್ಲರ ಹೊಣೆ  ಎಂಬ ದೋರಣೆ ಹೊತ್ತು ಹೊರಟಕ್ಕೆ ನಿಂತವರು ಪರಿಸರ ಪ್ರೇಮಿ ಶ್ರೀ ಪಂಡಿತ ಮುಂಜಿ.
                                        
         ಕಾಕ್ಟುಸ ಗಿಡ ಬೆಳೆಸುವುದರಲ್ಲಿ ಮೂರೂ ಬಾರಿಗಿನ್ನಿಸ್ ದಾಖಲೆ ಮಾಡಿದವರು ಶ್ರೀ ಪಂಡಿತ ಮುಂಜಿ.2001 ರಲ್ಲಿ  ಸಿರಸ್ ಜಾತಿಯ ಕಾಕ್ಟುಸನ್ನು 50  ಅಡಿ ಬೆಳೆದು ಗಿನ್ನಿಸ ದಾಖಲೆ ಮಾಡಿದ್ದಾರೆ. ಮರುವಷಾ೯ 60 ಅಡಿ ಬೆಳೆದು  ಗಿನ್ನಿಸ್ ದಾಖಲೇ ಮಾಡಿದರು .2004 ರಲ್ಲಿ 70 ಅಡಿ ಕಾಕ್ಟುಸ್ ಬೆಳೆದು ಮತ್ತೊಮ್ಮೆ ಗಿನ್ನಿಸ್ ದಾಖಲಿಸಿದರು.
            ಏನು ಯೋಚನೆ ಮಾಡುತ್ತಿದ್ದಿರ .........?? ಪಂಡಿತ ಅವರು ಬರೆ ಕಳ್ಳಿಗಿಡಗಳನ್ನೂ ಬೆಳೆಯುತ್ತಾರೆ ಎಂದು ಅಂದುಕೊಂಡಿರ ....?  ಪುಟ್ಟ ಕಾಡಿನ ಪ್ರಕೃತಿ ಮದ್ಯೆ  ಇವರ ಮನೆ ಇದೆ.ನಾನಾ ತರಹದ ಗಿಡ ಬಳ್ಳಿಗಳನ್ನು ಇವರ
ಮನೆ ಸುತ್ತ ಮುತ್ತ ನೋಡಬಹುದು.
                    ಇವರು ವಿಶೇಷ ವನವನ್ನು  ನಿಮಿ೯ಸಿದ್ದಾರೆ .  ಅದುವೇ  "ನವಗ್ರಹ ವನ"  ನವದೆವತೆಗಳು  ಹೊಂದಿರುವ    ವೃಕ್ಷಗಳನ್ನು ಇಲ್ಲಿ ಅವರು ಬೆಳೆಸಿದ್ದಾರೆ.  ಬುದನಿಗೆ ಉತ್ತರಾಣಿ,ಶುಕ್ರನಿಗೆ ಅತ್ತಿಮರ,ಚಂದ್ರನಿಗೆ ಮುತ್ತಲು,ಮಂಗಳಕ್ಕೆ 
ಕದರ ವೃಕ್ಷ ,ರವಿಗೆ ಬಿಳಿಎಕ್ಕ ,ಗುರುವಿಗೆ ಅಶ್ವಥ ವೃಕ್ಷ, ಕೇತುಗೆ ದಬೆ೯,ಶನಿಗೆ ಬನ್ನಿವೃಕ್ಷ,ರಾಹುಗೆ  ಕರಿಕೆ ಹೀಗೆ ಒಂಭತ್ತು
 ಗ್ರಹಗಳಿಗೆ ಒಂಭತ್ತು  ವೃಕ್ಷಗಳಿವೆ .
        
         



"ಪ್ರಕೃತಿ ಯಾವಾಗಲು ನಮಗೆ



ಒಳ್ಳೆಯವಾತಾವರನಕೊಡುತ್ತಿದೆ . ಹಿಂದಿನ ಕಾಲದಲ್ಲಿ ಹಿರಿಯರುವೃಕ್ಷಗಳನ್ನು ಸುತ್ತು ಹಾಕಿ ರೋಗ ಮಾಯವಾಗುತ್ತದೆ,ನವಗ್ರಹ ದೇವತೆಗಳು ನಮ್ಮನ್ನು ರಕ್ಷಿಸುತ್ತಾರೆ                      
    ಎಂದು ಹೇಳುತ್ತಿದ್ದರು.ಏಕೆಂದರೆ ನವಗ್ರಹ ದೇವತೆಗಳು  ವೃಕ್ಷದ ರೂಪದಲ್ಲಿ ನಮಗೆ ಜೀವ ದಾನ ಮಾಡುತ್ತಿರುತ್ತಾರೆ
ಎಂದು ಪರಿಸರ ಪ್ರೇಮಿ ಪಂಡಿತ ಮುಂಜಿ ಹೇಳುತ್ತಾರೆ .
                  ಸವ೯ಜನಿಕ ಉದ್ಯಾನವನ ದಲ್ಲಿ ತಾವೇ ದುಡಿದು ಸುಂದರವಾಗಿ ನಿಮಿ೯ಸಿದ್ದಾರೆ.ಅಪರೂಪದ ರುದ್ರಾಕ್ಷಿ ಗಿಡಗಳಂಥ
ಅನೇಕ ಗಿಡಗಳನ್ನು ತಂದು ನೆಟ್ಟು ,ರಕ್ಷಿಸುವ ಕೆಲಸವನ್ನು ಸ್ವ ಇಚ್ಛೆಯಿಂದ ಮಾಡುತ್ತಾರೆ.ಪರಿಸರ ರಕ್ಷಣೆ ಬಗ್ಗೆ ಬಿತ್ತಿಚಿತ್ರಗಳ ಮೂಲಕ   ಜನರಲ್ಲಿ ಶಿಕ್ಷಣ ನೀಡುತ್ತಾರೆ.

            ಗಿನ್ನಿಸ್ ಕಾಕ್ಟುಸ್ ವೀರ,ರಾಷ್ರಿಯ ಸಾಂಸ್ಕೃತಿಕ ಅಕಾಡಮಿ ಪ್ರಶಸ್ತಿ ,ಡಾ.ಎ ಪಿ ಜೆ ಅಬ್ದುಲ್ ಕಲಾಂ ರಾಷ್ರಿಯ ಪ್ರಶಸ್ತಿಗಳನ್ನು ,ಅನೇಕ ಪ್ರಶಸ್ತಿಗಳನ್ನು ತಮ್ಮ ತೆಕ್ಕೆಗೆ ಬಚಿಕೊಂಡಿದ್ದರೆ. ಇಷ್ಟೆಲ್ಲಾ ಸಾದನೆ ಮಾಡಿದ ಇವರನ್ನು ಗುರುತಿಸುವುದು ನಮ್ಮ ಕತ೯ವ್ಯ .
 ತನು ಮನ  ಧನದಿಂದ ನಾವು ಅವರೊಂದಿಗೆ  ಪರಿಸರ ರಕ್ಷಣೆಗೆ ನಿಲ್ಲೋಣ.    
     
           

  




1 comment:

  1. ನಿಮ್ಮ ಸಾಧನೆ ನೋಡಿ ತುಂಬಾ ಆನಂದವಾಯಿತು. ವೃಕ್ಷೋ ರಕ್ಷಿಥಿ ರಕ್ಷಿತಃ
    ಭಗವಂತನ ಸೇವೆಯೇ ವೃಕ್ಷ ಸೇವೆ. ನಿಮ್ಮಂತಹವರ ಸಂತತಿ ಕೋಟಿ ಕೋಟಿ ಮುಟ್ಟಲಿ. ನಾನು ಕೂಡ ನಮ್ಮ ತೋಟದಲ್ಲಿ ೬೦೦ ಮರ ಗಿಡ ಬೆಳೆಸಿದ್ದೇನೆ.
    ನವಗ್ರಹ ವನ ನಿರ್ಮಿಸಬೇಕೆಂಬ ಮಹದಾಸೆಗೆ ನಿಮ್ಮಿಂದ ಸಲಹೆ ಗಿಡ ಸಿಗುವ ಮಾಹಿತಿ
    ಸಿಗಬಹುದೇ. ವೃಕ್ಷ ಪ್ರೇಮಿ
    ಇಂತಿ ನಿಮ್ಮ ಸ್ನೇಹಕ್ಕೆ
    ನಂದಿ(ಕರಿಬಸಪ್ಪ) ಮಲೆಬೆನ್ನೂರು.ದಾವಣಗೆರೆ.೯೮೮೦೯೭೩೨೧೮ nandimbr@gmail.com

    ReplyDelete