ಆಯುರ್ವೇದಲ್ಲಿನ ತ್ರಿದೋಷಗಳನ್ನೂ ನೀವು ತಿಳಿದಿದ್ದೀರಿ.ಅವು ವಾತ,ಪಿತ್ತ, ಕಫ . ಆಯುರ್ವೇದದಲ್ಲಿ ಈ ತ್ರಿದೋಷಗಳ ಆದಾರದ ಮೇಲೆ ರೋಗಿಗಳ ರೋಗವನ್ನು ಕಂಡು ಹಿಡಿಯುತ್ತಾರೆ.ನಿಮ್ಮ ಪ್ರಕೃತಿ ಸ್ವಭಾವ ತಿಳಿಯಬೇಕೆ ..? ಹಾಗಾದರೆ ಮುಂದೆ ಓದಿ .....
ವಾತಜ ಪ್ರಕೃತಿ
- ಕೂದಲುಗಳು ಒಡಕಾಗಿರುತ್ತವೆ.ಯಾವಾಗಲು ಒಣಗಿಕೊಂಡಿರುತ್ತವೆ.ತುಸು ಬುಡು ಬಣ್ಣದ್ದಾಗಿರುತ್ತವೆ.
- ಯಾವಾಗಲು ಬಿಸಿಯಾದ ಪದಾರ್ಥಗಳಲ್ಲಿ ಇಚ್ಛೆ .ತಂಪು ಪದಾರ್ಥಗಳಲ್ಲಿ ದ್ವೇಷ .
- ಧೀ,ಸ್ಮೃತಿ ,ಧೃತಿ ಅಸ್ಥಿರವಾಗಿರುತ್ತವೆ.ವಿಷಯಗಳನ್ನು ಗ್ರಹಿಸಬಲ್ಲರು ಆದರೆ ಶೀಘ್ರವಾಗಿ ಅವನ್ನು ಮರೆತು ಬಿಡುತ್ತಾರೆ.
- ಅಧಿಕ ಚೇಷ್ಥೆಗಳು,ಅಸ್ಥಿರವಾದ ಮೈತ್ರಿ ಮತ್ತು ಕೆಲಸ ಕಾರ್ಯಗಳು ,ಅಧಿಕಮಾತು.
- ಹಣ ,ಬಲ ಮತ್ತು ನಿದ್ರೆ ಕಡಿಮೆ
- ಮಾತು ತಡೆದು ತಡೆದು ಬರುತ್ತವೆ.ವಾಣಿ ವಡಕಾಗಿರುತ್ತವೆ.
- ಹೆಚ್ಚು ತಿನ್ನುವವರು,ವಿಲಾಸಿ ಜೀವನ ಬಗ್ಗೆ ಆಸಕ್ತಿ.
- ನಾಸ್ತಿಕ,ದೇವರಲ್ಲಿ ಹಾಗು ಇತರರಲ್ಲಿ ನಂಬಿಕೆ ಇಲ್ಲದವನು/ದವಳು.
- ಸಂಗಿತ,ಹಾಸ್ಯ ,ಬೇಟೆ ,ಸಾಹಸ ಮತ್ತು ಜಗಳಗಳಲ್ಲಿ ಆಸಕ್ತಿ .
- ಸಿಹಿ,ಹುಲಿ ಮತ್ತು ಉಪ್ಪು ಈ ರುಚಿಗಳಲ್ಲಿ ಪ್ರೀತಿ.
- ಉದ್ದವಾದ ಮತ್ತು ತೆಳ್ಳಗಿನ ಶರೀರ .
- ನಡೆದಾಡುವಾಗ ಉಂಟಾಗುವ ಶಬ್ದ ಹೆಚ್ಚು.
- ಇವರು ತಮ್ಮ ಕನಸುಗಳಲ್ಲಿ ಬೆಟ್ಟಗುಡ್ಡಗಳಲ್ಲಿ ಸಂಚರಿಸುವರು.ಆಕಾಶದಲ್ಲಿ ಹಾರಾಡುವರು.ಮರಗಳನ್ನು ಇರುವರು. ಅಧಿಕ ಹಸಿವು ಬಾಯಾರಿಕೆಗಳಿಂದ ಕುಡಿರುವವರು.
ಪಿತ್ತಜ ಪ್ರಕೃತಿ
- ಗೌರವರ್ಣದವರು .ಯಾವಾಗಲು ಬಿಸಿಯಾಗಿರುತ್ತಾರೆ.
- ಶೂರ,ಅಭಿಮಾನಿ ಕೆಂಚು ಬಣ್ಣದ ತಲೆ ಕೂದಲುಗಳು .
- ಮಾಲೆ,ಆಭರಣಗಳು,ಸೌದರ್ಯ ವರ್ಧಕಗಳು ಅಧಿಕ ಆಸಕ್ತಿ.
- ಸಚ್ಚಾರಿತ್ರ್ಯ ಪ್ರಿಯ ಮತ್ತು ತನ್ನ ಆಶ್ರಿತರಿಗೆ ಸದಾ ಮೆಚ್ಚಿನವರು .
- ಅಧಿಕ ಸಾಹಾಸ್ ,ಬುದ್ಧಿ ಮತ್ತು ಬಲಗಳಿಂದ ಕೂಡಿದವರು.
- ಶರೀರದ ಗಂಟುಗಳು ಭದ್ರವಾಗಿರುವುದು .ಮಾಂಸ ಕಡಿಮೆ.
- ಸಂಕಟ ಕಾಲದಲ್ಲಿ ಶತ್ರುಗಳನ್ನು ರಕ್ಷಿಸುವರು.
- ತಣ್ಣಗಾದ ಆಹಾರದಲ್ಲಿ ಇಚ್ಛೆ.ಸಿಹಿ,ಒಗರು ಮತ್ತು ಕಹಿ ಭಕ್ಷ್ಯ ಭೋಜ್ಯಗಳು ಇವರಿಗೆ ಇಷ್ಟ.
- ಬಿಸಿಲೆಮ್ದರೆ ಆಗದು,ಬಹಳ ಬೆವರುವರು.
- ಇವರ ಆಯುಷ್ಯ ಮತ್ತು ಬಳಗಳು ಮಧ್ಯಮ ಪ್ರಮಾಣದ್ದು.
- ಇವರ ಕನಸುಗಳಲ್ಲಿ-ಹೊ೦ ಬಣ್ಣದ ದೃಶ್ಯಗಳು,ಹಳದಿ ಹೂಗಳು,ಉರಿಯುತ್ತಿರುವ ಸೌಧಿಗಳು,ಸೂರ್ಯ ಇತ್ಯಾದಿ ಹೆಚ್ಚು ಬೀಳುತ್ತವೆ
ಕಫಜ ಪ್ರಕೃತಿ - ಸೌಮ್ಯ ಸ್ವರೂಪ
- ಹಸಿವೆ,ಬಾಯಾರಿಕೆ,ಕ್ಲೇಷಗಳಿಗೆ ಇವನು ಅ೦ಜಲಾರ.
- ಸತ್ಯವಾದಿ,ಬುದ್ಧಿಶಾಲಿ.
- ದಟ್ಟವಾದ ಕಡು ನೀಲಿ ಮಿಶ್ರಿತ ಕಪ್ಪು ಕೂದಲು .
- ಇವನಿಗೆ ಸಂತಾನ,ಧನ,ಧಾನ್ಯ,ಸೇವಕರು ಇತ್ಯಾದಿ ಎಲ್ಲವು ಹೆಚ್ಚು.
- ಇವರ ವೈರಾವು ಗುಪ್ತವಾಗಿದ್ದು,ಬಹಕಾಳದವರೆಗೆ ದ್ವೇಷವನ್ನು ಮರೆಯದವರು.
- ಇವರು ಮಾತಾಡುವುದು,ತಿನ್ನುವುದು ಕಡಿಮೆ.
- ಆಯುಷ್ಯ-ಸುದೀರ್ಘ,ಹಣಕಾಸು ಹೇರಳ.
- ದಾನಶಿಲ,ಉದಾತ್ತ ಚಿಂತಕ,ಗಂಭೀರ.ಕ್ಷಮಾಶೀಲ.
- ಇವರ ಮೈತ್ರಿ ಗಾಢವಾದುದು.
- ಧರ್ಮಾತ್ಮ ,ಎಂದು ಕೇಡು ನುಡಿಯದವರು.
- ಇವರ ಮಾತು ಸಮುದ್ರದ ಬೋರ್ಗರೆತವನ್ನು ಹೋಲುವುದು,ಬಾಲ್ಯದಿಂದ ಸಹನಾಶೀಲರು.
- ಅಳುವುದಾಗಲಿ,ಆಸೆಬುರುಕುತನವಾಗಲಿ ಇವರಿಂದ ದೂರ.
ಆದರೆ ಸಮಪ್ರಕೃತಿ ಎಲ್ಲಕ್ಕಿಂತ ಒಳ್ಳೆಯದು. ನಿಮ್ಮ ಸ್ವಭಾವ ನೀವು ಬಲ್ಲಿರಿ.ಆ ಸ್ವಭಾವಗಳ ಆದಾರ
ಮೇಲೆ ನಿಮ್ಮ ಪ್ರಕೃತಿ ಯಾವುದೆಂದು ನೀವೇ ತಿಳಿಯಿರಿ.ಈ ವಿಷಯವನ್ನು ಹೇಳಿದ್ದು ನನ್ನ ಆಯುರ್ವೇದ ಗುರುಗಳು.
ಮೇಲೆ ನಿಮ್ಮ ಪ್ರಕೃತಿ ಯಾವುದೆಂದು ನೀವೇ ತಿಳಿಯಿರಿ.ಈ ವಿಷಯವನ್ನು ಹೇಳಿದ್ದು ನನ್ನ ಆಯುರ್ವೇದ ಗುರುಗಳು.
No comments:
Post a Comment