ಭೂಮಿ ಒಂದು ಸುಂದರ ಬುಗುರಿ........
ಆ ಶಿವನೆ ಛಾತಿ ಕಣೋ .........
ಎಂಬ ವಿಷ್ಣುವರ್ಧನ ಅವರ ನಿಶ್ಶಬ್ಧ ಸಿನೆಮಾದ ಹಾಡು ಕೇಳಿದ್ದೇವೆ ಅಲ್ಲವೇ ....? ಬಣ್ಣ ಬಣ್ಣದ ಹೂ ಗಿಡಗಳನ್ನೂ ,ಅನೇಕ ತರಹತ ಜೀವರಾಶಿಗಳನ್ನು , ಸುಂದರ ಪ್ರಕೃತಿ ಹೊಂದಿರುವ ಭೂಮಿ . ನಿಜವಾಗಲೂ ಒಂದು ಸುಂದರ ಬುಗುರಿ. ಈ ಭೂಮಿ ಎಂಬ ಬುಗುರಿಯ ಸೂತ್ರದಾರ ಪರಮೇಶ್ವರ . ಅವನು ಆಡಿಸಿದಂತೆ ನಡೆಯುವುದು ಭೂಮಿ. ಭೂಮಿ ನಡೆದಾಗ ನಾವು ತಾಯಿಯಂತೆ ನಡೆಯಬೇಕು.
ಭೂಮಿ ನಮ್ಮೆಲ್ಲರನ್ನೂ ಸಲಹುವ ತಾಯಿ.ಭೂ ತಾಯಿ ಇಲ್ಲದಿದ್ದರೆ ನಮ್ಮ ಸೃಷ್ಟಿ ಆಗುತ್ತಿರಲಿಲ್ಲ .ಈ ಕಾರಣಕ್ಕೆ ನಾವು ಭೂಸ್ಪರ್ಶ ಮಾಡುವ ಮುನ್ನ 'ಪಾದ ಸ್ಪರ್ಶಮ್ ಕ್ಷಮಸ್ವಮೆ' ಎಂದು ಹೇಳಿ ನಮಸ್ಕರಿಸಿ ಏಳುವುದು ಸಂಪ್ರದಾಯ. ನಾವು ಇಡುವ ಹೆಜ್ಜೆಯಿಂದ ನಮ್ಮ ತಾಯಿಗೆ ನೋವಾಗಬಾರದು ಎಂಬ ಭಾವನೆ.
ಆದರೆ ನಾವು ತಾಯಿಯನ್ನು ಎಷ್ಟು ಕಲುಷಿತಗೊಲಿಸುತ್ತಿದ್ದೇವೆ ಎಂದರೆ ಮಣ್ಣಿನಲ್ಲಿ ಕರಗದ ವಸ್ತುಗಳನ್ನು ಬಳಸುತ್ತಿದ್ದೇವೆ.
ಇದರಿಂದ ಭೂ ಮಾಲಿನ್ಯ ಉಂಟಾಗಿ ಮಳೆ ಬೆಳೆ ನಾಶವಾಗುತ್ತಿವೆ.ಮುಂದೆ ಆಹಾರದ ಸಮಸ್ಯೆಯನ್ನು ಹೊಂದಬೇಕಾಗುವ
ಬರಿಸ್ಥಿತಿ ಬರಬಹುದು.
ಈ ಎಲ್ಲ ಸಮಸ್ಯೆಗಳ ತಿಳವಳಿಕೆ ಜನರಲ್ಲಿ ಮೂಡಿಸುವ ಸಲುವಾಗಿ ಏಪ್ರಿಲ್ 22 ,1970 ರಂದು ಪೃಥ್ವಿ ದಿನಾಚರಣೆಯನ್ನು ಪ್ರಾರಂಬಿಸಿದರು.ಹಾಗೆ ಭೂಮಿಗೆ ಕೃತಜ್ಞತೆ ಅರ್ಪಿಸಲು ದಿನಾಚ್ಜರಣೆ ಹಮ್ಮಿಕೊಳ್ಳಲಾಗಿದೆ.
No comments:
Post a Comment