ಕಂದಮ್ಮಗಳು ಕರೆಯುವ ಚಂದಿರ ಹತ್ತಿರಕ್ಕೆ ಬಂದ .........!!

ಹುಣ್ಣಿಮೆ ಬಂತೆಂದರೆ ಸಾಕು ಎಲ್ಲರಿಗು ಚಂದ್ರನನ್ನು ನೋಡುವ ಕಾತರ್.ಚಂದಾಮಾಮಾ ಅಷ್ಟು ದೂರದಲ್ಲಿ ಇದ್ದರು ಎಷ್ಟು ಸುಂದರವಾಗಿ ಕಾಣುತ್ತಾನೆಂದರೆ ಊಟ ಮಾಡದ ಮಗು ಕೂಡಾ ಅವನ ಆ ಚಂದಕ್ಕೆ ಅಳು ನಿಲ್ಲಿಸಿ ಊಟ ಮಾಡುತ್ತದೆ.ಹೀಗಿರುವಾಗ ನಮಗೆ ಚಂದಾಮಾಮಾ ಇನ್ನೂ ಹತ್ತಿರ ಆದಾಗ ಅದರ ಸೊಬಗೆ ಬೇರೆ ....!
ಶನಿವಾರ ಹುಣ್ಣಿಮೆ ದಿನ ಚಂದಾಮಾಮಾ ಭೂಮಿಗೆ ಹತ್ತಿರ ಬಂದಾಗ ಅವನ ಸೊಬಗು ಇನ್ನಷ್ಟು ಇಮ್ಮಡಿ ಆದ ಹಾಗೆ ಅನಿಸಿತು.ಅದರ ಸೊಬಗನ್ನು ಸವಿದವರೇ ಹೆಚ್ಚು."ಸುಪರ್ ಮೂನ್" ಸುಪರ್ .ಸುಪರ್ ಮೂನ್ ಒಮ್ಮೆ ಮೂಡಿ ಇತಿಹಾಸಕ್ಕೆ ಸೇರಿತು.
ಚಂದಾಮಾಮಾ ಭೂಮಿಯಿಂದ 3 .56577 ಲಕ್ಷ ಕಿ.ಮೀ ದೂರ ಇದ್ದ (ಸಾಮಾನ್ಯವಾಗಿ 3 .084 ಲಕ್ಷ ಕಿ ಮೀ ದೂರ ಇರುತ್ತಾನೆ.)ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.ಅಂಡಾಕಾರದ ಚಂದ್ರ ಭೂಮಿಅತಿ ಹತ್ತಿರ ಬಂದು ಪೂರ್ಣಿಮೆಯನ್ನು ಒಂದು ಸುಂದರ ಬೆಳ೦ದಿಗಳಾಗಿಸಿ ಬೆಳಗಿಸಿದ್ದಾನೆ.
ಸುಪರ್ ಚಂದಾಮಾಮಾ ಬಂದಾಗ ಕೆಲವರಿಗೆ ಕಾತರ ,ಕೆಲವರಿಗೆ ಸ್ವರ್ಗ ಅಂಗೈಯಲ್ಲಿ ಸಿಕ್ಕ ಹಾಗೆ ಕುಣಿದು ಕುಪ್ಪಳಿಸಿದರು.ಭಯ ದುಗುಡ ಇದ್ದವರು ನಿರಾಳ ಉಸಿರನ್ನು ತೆಗೆದುಕೊಂಡರು.ಏಕೆಂದರೆ ಸುನಾಮಿ,ಭೂಕಂಪದಂಥ ಬೀಕರ
ಘಟನೆ ನಡಿಯುತ್ತದೆ ಎಂಬ ನಂಬಿಕೆ ಅವರದ್ದಾಗಿತ್ತು.ಚಂದಮಾಮಾ ಅದನ್ನೆಲ್ಲ ಹುಸಿಗೊಳಿಸಿದ್ದಾನೆ.
ಇಂಥ ಅಪರೂಪದ ಘಟನೆ ನಡೆಯುವ ಸಮಯದಲ್ಲಿ ಏನೇನೂ ಅಪವಾದವನ್ನು ಹುಟ್ಟಿಸಿ ಅದರ ಸೊಬಗನ್ನು ಮರೆಮಾಚಬಾರದು.ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಇಂಥ ಘಟನೆ ನೋಡಿ ಆನಂದಿಸಬೇಕು.ಚಂದಾಮಾಮ ಮತ್ತಿ ಬರಲಿ.
"ಕಂದಮ್ಮಾ ಕರೆಯುವ ಚಂದಿರ ಮತ್ತೆ ಬರಲಿ...."

No comments:
Post a Comment