ಹಣ್ಣುಗಳರಾಜ ಮಾವಿಗೆ ಸ್ವಾಗತ ....ಬೇಸಿಗೆ ಬಂತುಅಂದರೆ ಮಾವಿನ ಹಣ್ಣಿನ ಬರುವಿಕೆಗಾಗಿ ಕಾಯುತ್ತಿರುತ್ತೇವೆ.ಮಾವು ಎಂದಾ ಕ್ಷಣ ಮಾವಿನ ರೂಪ,ಅದರ ಸ್ವಾದ ನೆನಪಾಗಿ ಬಾಯಲ್ಲಿ ನೀರು ಬರುತ್ತದೆ.ಮಾವಿನ ಹಣ್ಣಿನಲ್ಲಿ ಅನೇಕ ವಿಧಗಳು ತೋತಾಪುರಿ,ಕಾಡುಮಾವು,ಬಾದಾಮಿ,ಗೋವಿನಮಾವಿನ ಹಣ್ಣು ಹೀಗೆ.ಮಾವಿನ ಮಿಡಿ ಯಿಂದ ಗೊರಟೆ ವರಗೂ ವಿವಿದ ಅಡುಗೆಗಳನ್ನೂ,ಉಪ್ಪಿನಕಾಯಿಗಳನ್ನು ಮಾಡುತ್ತಾರೆ.ಮಾವು ಬಂತೆಂದರೆ ಸಾಕು ಮಹಿಳೆಯರಿಗೆ ಸುಗ್ಗಿಯೂ ಸುಗ್ಗಿ.ಮಕ್ಕಳಿಗೆ ಅದನ್ನು ತಿನ್ನುವ ಕಾತರ.ವಯೂವೃದ್ದರಿಗೆ ಮಾವಿನ ತಿಂಡಿಗಳನ್ನು ತಿನ್ನುವ ನಿರಿಕ್ಷೇ.....
![]() |
ಹಣ್ಣುಗಳ ರಾಜ ಮಾವು |
ಮಾರುಕಟ್ಟೆಯಲ್ಲಿ ಮಾವುಗಳ ಬೆಲೆ ಗಗನಚುಂಬಿ ಆದರೂ ಮಾವಿನ ಅಭಿಮಾನಿಗಳು ಕಡಮೆ ಆಗಿಲ್ಲ.ತನ್ನ ಸ್ವಾದದಿಂದ ಎಲ್ಲರನ್ನು ಬರಮಾಡಿಕೊಳ್ಳುತ್ತಿದೆ.ಮಾವಿನ ಬರುವಿಕೆಯಿಂದ ಅನೇಕ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ.ಹಣ್ಣುಗಳ ಮಾರಾಟದಿಂದ,ಕೆಲವು ಮಹಿಳೆಯರು ಉಪ್ಪಿನ ಕಾಯಿ ಹಾಕಿ ಮಾರಾಟ ಮಾಡುತ್ತಾರೆ.ಮಾಜ,ಮಾಗಳಂಥ ಜ್ಯೂಸ್
ಕಂಪನಿಗಳಿಗೆ ಸುಗ್ಗಿ.ಹೀಗೆ ಮಾವಿನ ರಾಜನ ಆಗಮನದಿಂದ ಎಲ್ಲಡೆ ಸಂತೋಷ ಸಂಭ್ರಮ.
No comments:
Post a Comment