ಮಾನವ ಕುಲದಲ್ಲಿ ಬೇರೆಬೇರೆ ರೂಪ ಗುಣ ಹೊಂದಿದ ಮಾನವರು ಇರುತ್ತಾರೆ.ತಮ್ಮದೇ ಗುಣ ,ಧರ್ಮ, ಸಂಸ್ಕೃತಿಯನ್ನು ಹೊಂದಿರುತ್ತಾರೆ.ತಮ್ಮದೇ ಆದ ಬುದ್ದಿಮತ್ತೆಯನ್ನು ಹೊಂದಿರುತ್ತಾರೆ.ಯಾರು ಬುದ್ದಿವಂತರಲ್ಲ,ಯಾರು ದಡ್ಡರಲ್ಲ ಎಂಬುದು ತಿಳಿಯಬೇಕು.ಏಕೆಂದರೆ ಬುದ್ದಿವಂತರೆನಿಸಿ ಕೊಂಡವರು ಕೆಲವು ವಿಷಯಗಳಲ್ಲಿ ದಡ್ದರಿರುತ್ತಾರೆ.ದಡ್ದರೆನಿಸಿ ಕೊಂಡವರು ದಡ್ಡರೆ ಇರುತ್ತಾರೆ ಎಂಬುದಕ್ಕೆ ಸಾದ್ಯವಿಲ್ಲ.
ಬುದ್ದಿವಂತರೆನಿಸಿ ಕೊಂಡವರು ಅಥವಾ ಅಂತಸ್ತನ್ನು ಹೊಂದಿದವರು ಏನು ಮಾಡಿದರು ಸಮಾಜಕ್ಕೆ ಕ್ಷಮಿಸುವ ಗುಣ ಹೊಂದಿದೆ.ಅದೇ ಅಂತಸ್ತನ್ನು ಹೊಂದಿರದ ಬುದ್ದಿವಂತರೆನಿಸಿ ಕೊಳ್ಳದವರು.ಸಣ್ಣ ತಪ್ಪು ಮಾಡಿದರೂ ಅವರಿಗೆ ಬೈಗುಳ ತಪ್ಪಿದಲ್ಲ.ದೊಡ್ಡದಾಗಿ ಮಾಡುತ್ತಾರೆ.ಇದು ಸರಿಯೇ....?
ಇದೇ ಭಾವನೆ ಶಿಕ್ಷಕರು ಅನುಕರಿಸಿದರೆ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವರಾರು...?
ನಾನು ಎಲ್ಲ ಶಿಕ್ಷಕರಿಗೆ ಅನ್ವಯಿಸುತ್ತಿಲ್ಲ. ಕೆಲವರು ಈ ಪದ್ದತಿಯನ್ನು ಅನುಸರಿಸುತ್ತಾರೆ.ನಾನು ಹೇಳುವುದು ಇಷ್ಟೇ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನೂ ಪ್ರೋತ್ಸಾಹಿಸುವಂತಾಗಲಿ.ಅವರಿಗೆ ಮಾರ್ಗದರ್ಶನ ನೀಡಬೇಕು.ಪ್ರತಿಭೆ ಪ್ರದರ್ಶಿಸುವ ವಿದ್ಯಾರ್ಥಿಗಳಿಗೆ ಮಾತ್ರ ಗಮನ ನೀಡದೆ ಪ್ರತಿಭೆ ಹೊರ ಹಾಕಲು ಹಿಂದೇಟು ಹಾಕುವ,ವೇದಿಕೆ ಸಿಗದ ಮಕ್ಕಳಿಗೆ ಶಿಕ್ಷಕರು ಹೆಚ್ಚು ಗಮನ ನಿಡುವಂತಾಗಲಿ....ಎಂಬುವ ಪ್ರಾರ್ಥನೆ ಮನದಲ್ಲಿ
No comments:
Post a Comment