Friday, 29 April 2011

ನಿಮ್ಮ ಪ್ರಕೃತಿ ಸ್ವಭಾವ ಯಾವುದು ಎಂದು ನೀವೇ ತಿಳಿದುಕೊಳಿರಿ...!!

     ಆಯುರ್ವೇದಲ್ಲಿನ ತ್ರಿದೋಷಗಳನ್ನೂ ನೀವು ತಿಳಿದಿದ್ದೀರಿ.ಅವು ವಾತ,ಪಿತ್ತ, ಕಫ .  ಆಯುರ್ವೇದದಲ್ಲಿ  ಈ ತ್ರಿದೋಷಗಳ  ಆದಾರದ ಮೇಲೆ ರೋಗಿಗಳ ರೋಗವನ್ನು ಕಂಡು ಹಿಡಿಯುತ್ತಾರೆ.ನಿಮ್ಮ ಪ್ರಕೃತಿ ಸ್ವಭಾವ ತಿಳಿಯಬೇಕೆ ..? ಹಾಗಾದರೆ  ಮುಂದೆ  ಓದಿ .....

                                                   ವಾತಜ  ಪ್ರಕೃತಿ      

  • ಕೂದಲುಗಳು ಒಡಕಾಗಿರುತ್ತವೆ.ಯಾವಾಗಲು ಒಣಗಿಕೊಂಡಿರುತ್ತವೆ.ತುಸು ಬುಡು ಬಣ್ಣದ್ದಾಗಿರುತ್ತವೆ.
  • ಯಾವಾಗಲು ಬಿಸಿಯಾದ ಪದಾರ್ಥಗಳಲ್ಲಿ ಇಚ್ಛೆ .ತಂಪು ಪದಾರ್ಥಗಳಲ್ಲಿ ದ್ವೇಷ .
  • ಧೀ,ಸ್ಮೃತಿ ,ಧೃತಿ ಅಸ್ಥಿರವಾಗಿರುತ್ತವೆ.ವಿಷಯಗಳನ್ನು ಗ್ರಹಿಸಬಲ್ಲರು ಆದರೆ ಶೀಘ್ರವಾಗಿ ಅವನ್ನು ಮರೆತು ಬಿಡುತ್ತಾರೆ.
  • ಅಧಿಕ ಚೇಷ್ಥೆಗಳು,ಅಸ್ಥಿರವಾದ ಮೈತ್ರಿ ಮತ್ತು ಕೆಲಸ ಕಾರ್ಯಗಳು ,ಅಧಿಕಮಾತು.
  • ಹಣ ,ಬಲ ಮತ್ತು ನಿದ್ರೆ ಕಡಿಮೆ
  • ಮಾತು ತಡೆದು ತಡೆದು ಬರುತ್ತವೆ.ವಾಣಿ ವಡಕಾಗಿರುತ್ತವೆ.
  • ಹೆಚ್ಚು ತಿನ್ನುವವರು,ವಿಲಾಸಿ ಜೀವನ ಬಗ್ಗೆ ಆಸಕ್ತಿ.
  • ನಾಸ್ತಿಕ,ದೇವರಲ್ಲಿ ಹಾಗು ಇತರರಲ್ಲಿ ನಂಬಿಕೆ ಇಲ್ಲದವನು/ದವಳು.
  • ಸಂಗಿತ,ಹಾಸ್ಯ ,ಬೇಟೆ ,ಸಾಹಸ ಮತ್ತು ಜಗಳಗಳಲ್ಲಿ ಆಸಕ್ತಿ .
  • ಸಿಹಿ,ಹುಲಿ ಮತ್ತು ಉಪ್ಪು ಈ ರುಚಿಗಳಲ್ಲಿ ಪ್ರೀತಿ.
  • ಉದ್ದವಾದ ಮತ್ತು ತೆಳ್ಳಗಿನ ಶರೀರ .
  • ನಡೆದಾಡುವಾಗ ಉಂಟಾಗುವ ಶಬ್ದ ಹೆಚ್ಚು.
  • ಇವರು ತಮ್ಮ ಕನಸುಗಳಲ್ಲಿ ಬೆಟ್ಟಗುಡ್ಡಗಳಲ್ಲಿ ಸಂಚರಿಸುವರು.ಆಕಾಶದಲ್ಲಿ ಹಾರಾಡುವರು.ಮರಗಳನ್ನು ಇರುವರು.                                             ಅಧಿಕ ಹಸಿವು ಬಾಯಾರಿಕೆಗಳಿಂದ ಕುಡಿರುವವರು.
    ಪಿತ್ತಜ ಪ್ರಕೃತಿ
  • ಗೌರವರ್ಣದವರು .ಯಾವಾಗಲು ಬಿಸಿಯಾಗಿರುತ್ತಾರೆ.
  •  ಶೂರ,ಅಭಿಮಾನಿ ಕೆಂಚು ಬಣ್ಣದ ತಲೆ ಕೂದಲುಗಳು .
  • ಮಾಲೆ,ಆಭರಣಗಳು,ಸೌದರ್ಯ ವರ್ಧಕಗಳು ಅಧಿಕ ಆಸಕ್ತಿ.
  • ಸಚ್ಚಾರಿತ್ರ್ಯ ಪ್ರಿಯ ಮತ್ತು ತನ್ನ ಆಶ್ರಿತರಿಗೆ ಸದಾ ಮೆಚ್ಚಿನವರು .
  • ಅಧಿಕ ಸಾಹಾಸ್ ,ಬುದ್ಧಿ ಮತ್ತು ಬಲಗಳಿಂದ ಕೂಡಿದವರು.
  • ಶರೀರದ ಗಂಟುಗಳು ಭದ್ರವಾಗಿರುವುದು .ಮಾಂಸ ಕಡಿಮೆ.
  • ಸಂಕಟ  ಕಾಲದಲ್ಲಿ ಶತ್ರುಗಳನ್ನು ರಕ್ಷಿಸುವರು.
  • ತಣ್ಣಗಾದ ಆಹಾರದಲ್ಲಿ ಇಚ್ಛೆ.ಸಿಹಿ,ಒಗರು ಮತ್ತು ಕಹಿ ಭಕ್ಷ್ಯ ಭೋಜ್ಯಗಳು ಇವರಿಗೆ ಇಷ್ಟ.
  • ಬಿಸಿಲೆಮ್ದರೆ ಆಗದು,ಬಹಳ ಬೆವರುವರು.
  • ಇವರ ಆಯುಷ್ಯ ಮತ್ತು ಬಳಗಳು ಮಧ್ಯಮ ಪ್ರಮಾಣದ್ದು.
  • ಇವರ ಕನಸುಗಳಲ್ಲಿ-ಹೊ೦ ಬಣ್ಣದ ದೃಶ್ಯಗಳು,ಹಳದಿ ಹೂಗಳು,ಉರಿಯುತ್ತಿರುವ ಸೌಧಿಗಳು,ಸೂರ್ಯ ಇತ್ಯಾದಿ ಹೆಚ್ಚು ಬೀಳುತ್ತವೆ

                         ಕಫಜ ಪ್ರಕೃತಿ
  • ಸೌಮ್ಯ ಸ್ವರೂಪ
  • ಹಸಿವೆ,ಬಾಯಾರಿಕೆ,ಕ್ಲೇಷಗಳಿಗೆ ಇವನು ಅ೦ಜಲಾರ.
  • ಸತ್ಯವಾದಿ,ಬುದ್ಧಿಶಾಲಿ.
  • ದಟ್ಟವಾದ ಕಡು ನೀಲಿ ಮಿಶ್ರಿತ ಕಪ್ಪು ಕೂದಲು .
  • ಇವನಿಗೆ ಸಂತಾನ,ಧನ,ಧಾನ್ಯ,ಸೇವಕರು ಇತ್ಯಾದಿ ಎಲ್ಲವು ಹೆಚ್ಚು.
  • ಇವರ ವೈರಾವು ಗುಪ್ತವಾಗಿದ್ದು,ಬಹಕಾಳದವರೆಗೆ ದ್ವೇಷವನ್ನು ಮರೆಯದವರು.
  • ಇವರು ಮಾತಾಡುವುದು,ತಿನ್ನುವುದು ಕಡಿಮೆ.
  • ಆಯುಷ್ಯ-ಸುದೀರ್ಘ,ಹಣಕಾಸು ಹೇರಳ.
  • ದಾನಶಿಲ,ಉದಾತ್ತ ಚಿಂತಕ,ಗಂಭೀರ.ಕ್ಷಮಾಶೀಲ.
  • ಇವರ ಮೈತ್ರಿ ಗಾಢವಾದುದು.
  • ಧರ್ಮಾತ್ಮ ,ಎಂದು ಕೇಡು ನುಡಿಯದವರು.
  • ಇವರ ಮಾತು ಸಮುದ್ರದ ಬೋರ್ಗರೆತವನ್ನು ಹೋಲುವುದು,ಬಾಲ್ಯದಿಂದ ಸಹನಾಶೀಲರು.
  • ಅಳುವುದಾಗಲಿ,ಆಸೆಬುರುಕುತನವಾಗಲಿ ಇವರಿಂದ ದೂರ.     
              ಆದರೆ ಸಮಪ್ರಕೃತಿ ಎಲ್ಲಕ್ಕಿಂತ  ಒಳ್ಳೆಯದು.  ನಿಮ್ಮ ಸ್ವಭಾವ ನೀವು ಬಲ್ಲಿರಿ.ಆ  ಸ್ವಭಾವಗಳ ಆದಾರ
ಮೇಲೆ ನಿಮ್ಮ ಪ್ರಕೃತಿ ಯಾವುದೆಂದು ನೀವೇ ತಿಳಿಯಿರಿ.ಈ ವಿಷಯವನ್ನು ಹೇಳಿದ್ದು ನನ್ನ ಆಯುರ್ವೇದ ಗುರುಗಳು.
             
                                                                                               
               
                                                                     

Thursday, 28 April 2011

ಭೂಮಿ ಒಂದು ಸುಂದರ ಬುಗುರಿ........ಆ ಶಿವನೆ ಛಾತಿ ಕಣೋ .........

                    ಭೂಮಿ ಒಂದು ಸುಂದರ ಬುಗುರಿ........
                    ಆ ಶಿವನೆ ಛಾತಿ ಕಣೋ .........
ಎಂಬ ವಿಷ್ಣುವರ್ಧನ ಅವರ ನಿಶ್ಶಬ್ಧ ಸಿನೆಮಾದ ಹಾಡು ಕೇಳಿದ್ದೇವೆ ಅಲ್ಲವೇ ....?  ಬಣ್ಣ   ಬಣ್ಣದ ಹೂ  ಗಿಡಗಳನ್ನೂ ,ಅನೇಕ ತರಹತ ಜೀವರಾಶಿಗಳನ್ನು , ಸುಂದರ ಪ್ರಕೃತಿ ಹೊಂದಿರುವ  ಭೂಮಿ . ನಿಜವಾಗಲೂ ಒಂದು ಸುಂದರ ಬುಗುರಿ. ಈ  ಭೂಮಿ ಎಂಬ ಬುಗುರಿಯ ಸೂತ್ರದಾರ  ಪರಮೇಶ್ವರ . ಅವನು ಆಡಿಸಿದಂತೆ ನಡೆಯುವುದು ಭೂಮಿ.   ಭೂಮಿ ನಡೆದಾಗ  ನಾವು ತಾಯಿಯಂತೆ  ನಡೆಯಬೇಕು.
           
              ಭೂಮಿ ನಮ್ಮೆಲ್ಲರನ್ನೂ ಸಲಹುವ ತಾಯಿ.ಭೂ ತಾಯಿ ಇಲ್ಲದಿದ್ದರೆ ನಮ್ಮ ಸೃಷ್ಟಿ ಆಗುತ್ತಿರಲಿಲ್ಲ .ಈ  ಕಾರಣಕ್ಕೆ ನಾವು  ಭೂಸ್ಪರ್ಶ ಮಾಡುವ ಮುನ್ನ 'ಪಾದ ಸ್ಪರ್ಶಮ್ ಕ್ಷಮಸ್ವಮೆ' ಎಂದು ಹೇಳಿ ನಮಸ್ಕರಿಸಿ ಏಳುವುದು ಸಂಪ್ರದಾಯ. ನಾವು ಇಡುವ ಹೆಜ್ಜೆಯಿಂದ ನಮ್ಮ ತಾಯಿಗೆ ನೋವಾಗಬಾರದು ಎಂಬ ಭಾವನೆ.
         
         ಆದರೆ ನಾವು ತಾಯಿಯನ್ನು ಎಷ್ಟು ಕಲುಷಿತಗೊಲಿಸುತ್ತಿದ್ದೇವೆ ಎಂದರೆ ಮಣ್ಣಿನಲ್ಲಿ ಕರಗದ ವಸ್ತುಗಳನ್ನು ಬಳಸುತ್ತಿದ್ದೇವೆ.
ಇದರಿಂದ ಭೂ ಮಾಲಿನ್ಯ ಉಂಟಾಗಿ  ಮಳೆ ಬೆಳೆ ನಾಶವಾಗುತ್ತಿವೆ.ಮುಂದೆ ಆಹಾರದ ಸಮಸ್ಯೆಯನ್ನು ಹೊಂದಬೇಕಾಗುವ 
ಬರಿಸ್ಥಿತಿ  ಬರಬಹುದು.   
          ಈ ಎಲ್ಲ ಸಮಸ್ಯೆಗಳ ತಿಳವಳಿಕೆ ಜನರಲ್ಲಿ ಮೂಡಿಸುವ ಸಲುವಾಗಿ ಏಪ್ರಿಲ್ 22 ,1970 ರಂದು ಪೃಥ್ವಿ ದಿನಾಚರಣೆಯನ್ನು ಪ್ರಾರಂಬಿಸಿದರು.ಹಾಗೆ ಭೂಮಿಗೆ ಕೃತಜ್ಞತೆ ಅರ್ಪಿಸಲು ದಿನಾಚ್ಜರಣೆ ಹಮ್ಮಿಕೊಳ್ಳಲಾಗಿದೆ.
  

Wednesday, 20 April 2011

ನೋಡಿ ನೋಡಿ ಎಲ್ಲರು
ಇವರು ರಾಮ ರಾಜ್ಯದ ರಾವಣರು
  
ಭರತ ಭೂಮಿಯಲ್ಲಿ ಈಗ ಇವರದೇ ಕಾರುಬಾರು 
ಇವರಿಗಿದ್ದರೆ ಸಾಕು "ಕಾರು ಬಾರು "






ಉಭಯ ಜಾಗದಲ್ಲಿ ವಾಸಿಸುವುದು ಇದರ ಗುಣ
ಇದು ಮೆಲ್ಲನೆ ನಡೆಯುವುದರಲ್ಲಿ ಪ್ರಥಮ ಸ್ಥಾನ
ಹಾಗಾದರೆ ಇದರ ಹೆಸರು ಹೇಳಿದವ ಜಾಣ
                ಏನಿದು............????

Monday, 18 April 2011

      सर्वे बवन्तु सुखिनः
      सर्वे सन्तु निरामयः
      सर्वे भद्राणि पश्यन्तु
      मा कश्चित् दुखः भाब्गवेत   विद्या ददाति विनयम्

Sunday, 17 April 2011

ಧಾರವಾಡದ ಗುಬ್ಬಚ್ಚಿಗಳು ಎಲ್ಲಿಗೆ ಹೋದವು ..........??


      


ನಮ್ಮ ಧಾರವಾಡದಲ್ಲಿ ಮೊದಲು ಮುಂಜಾವಿನ ಹೊತ್ತಿನಲ್ಲಿ ಗುಬ್ಬಚ್ಚಿಗಳ ಕಲರವ ಕೇಳುತ್ತಿತ್ತು.
  ಸಾಂಸ್ಕೃತಿಕ  ನಗರ ಸಂಗೀತಗಾರರ ನಗರ.ಅವರುಗಳಿಗೆ
ಪಕ್ಕದ ವಾದ್ಯಗಳ ತರಹ ಈ ಗುಬ್ಬಚ್ಚಿಗಳ ಕಲರವ ಇತ್ತು.
      
       ಈಗ ಮಕ್ಕಳಿಗೆ ಗುಬ್ಬಚ್ಚಿಗಳನ್ನೂ ತೋರಿಸಲು ಹೊರ ನಡೆದರೆ
ಗುಬ್ಬಚ್ಚಿಗಳು ಇಲ್ಲ ,ಅದರ ಕಲರವೂ ಇಲ್ಲ .ಗುಬ್ಬಚ್ಚಿಗಳು ಮಂಗಮಾಯವಾಗಿ ಬಿಟ್ಟಿವೆ.
ಹಾಗಾದರೆ ಧಾರವಾಡದ ಗುಬ್ಬಚ್ಚಿಗಳು ಎಲ್ಲಿಗೆ ಹೋದವು.......?
ಅಂತರಿಕ್ಷಗಳ ಬಳಕೆಯಿಂದ ಕಡಿಮೆ ಆಗಿವೆ ಎಂಬುದು ತಿಳಿದ ವಿಷಯ ಆದರೂ ಅದು ನಿರ್ಧಿಷ್ಟ ಕಾರಣವಲ್ಲ.
ಅಂತರಿಕ್ಷದ ತಂರಗಗಳು ಕಾಲುಗಳನ್ನು  ಎಳೆದಂಥಾಗುತ್ತದೆ.ಇದರಿಂದ ಗುಬ್ಬಚ್ಚಿಗಳು ಏನೂ ಅಪಾಯ ಇದೆ ಎಂದು ಅದರ ಹತ್ತಿರ ಸುಳಿಯುವುದಿಲ್ಲ .ಇದರ ಪ್ರಭಾವದಿಂದ ಗುಬ್ಬಚ್ಚಿಗಳು ನಾಶವಾಗುವುದು ಕಡಿಮೆ ಎಂದು ಪರಿಸರ ಪ್ರೇಮಿ ಪಂಡಿತ ಮುಂಜಿ ಹೇಳುತ್ತಾರೆ.
           "ನಮ್ಮ ಧಾರವಾಡದಲ್ಲಿ ಹಂಚಿನಮನೆ ಹೋಗಿ ಆರ್ ಸಿ ಸಿ ಮನೆಗಳು ಜಾಸ್ತಿ ಆಗುತ್ತಿವೆ.
ಹಾಗೆ ಮನೆಯ ಮುಂದೆ ಕಾಳು,ಕಡಿಗಳನ್ನು ಒಣಗಿಸುತ್ತಿದ್ದರು,ಸಂಗ್ರಹಿಸಿಡುತ್ತಿದ್ದರು.
ಈ ಕಾಲದಲ್ಲಿ ಕೃಷಿ ಕೆಲಸ ಮಾಡುವುದೇ ಅಪರೂಪ.ಏಕೆ ಇದನ್ನು ಹೇಳುತ್ತಿದ್ದೆನೆ ಎಂದು ಯೋಚಿಸುತ್ತಿರಾ......??
     ಗುಬ್ಬಚ್ಚಿಗಳು ಹಂಚಿನಮನೆಯಲ್ಲಿ ಮೇಲ್ಛಾವಣೆ ಹಂಚಿನ ಮಧ್ಯೆ ತನ್ನ ಸಂತಾನಾಭಿವೃದ್ಧಿ ಮಾಡುತ್ತವೆ.ಮನೆಯ ಮುಂದೆ ಬಿದ್ದಿರುವ ಕಾಳು ಕಡಿಗಳನ್ನು ತಿನ್ನುತ್ತಿದ್ದವು.ಈ ಆಹಾರದ ಕೊರತೆ,ಸಂತಾನಾಭಿವೃದ್ಧಿಗೆ ಸರಿಯಾದ ಸ್ಥಳದ ಅಭಾವದಿಂದ ಗುಬ್ಬಚ್ಚಿಗಳು ಕಮ್ಮಿವಾಗುತ್ತಿವೆ" ಎಂದು ಹೇಳುತ್ತಾರೆ ಪಂಡಿತ ಮುಂಜಿ ಅವರು. 

Tuesday, 12 April 2011

ಇದು ನನ್ನ ಮೊದಲ ಬ್ಲಾಗ್.ಇಲ್ಲಿ ಪರಿಸರಕ್ಕೆ ಸಂಬಂದಪಟ್ಟ  ಲೇಖನಗಳನ್ನೂ ,ಭಾವಚಿತ್ರಗಳನ್ನೂ, ಕವಿತೆಗಳನ್ನು  ಕಾಣಬಹುದು.ಇದರಲ್ಲಿ ತಪ್ಪು ಇದ್ದಲ್ಲಿ ಕ್ಷಮಿಸಿ
 ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುವ
                              ಅನ್ನಪೂರ್ಣ ಮಡಿವಾಳರ         

Saturday, 9 April 2011

ಕಂದಮ್ಮಗಳು ಕರೆಯುವ ಚಂದಿರ ಹತ್ತಿರಕ್ಕೆ ಬಂದ .........!!

     ಕಂದಮ್ಮಗಳು ಕರೆಯುವ ಚಂದಿರ ಹತ್ತಿರಕ್ಕೆ ಬಂದ .........!!

              ಹುಣ್ಣಿಮೆ ಬಂತೆಂದರೆ ಸಾಕು ಎಲ್ಲರಿಗು ಚಂದ್ರನನ್ನು ನೋಡುವ ಕಾತರ್.ಚಂದಾಮಾಮಾ ಅಷ್ಟು ದೂರದಲ್ಲಿ ಇದ್ದರು ಎಷ್ಟು ಸುಂದರವಾಗಿ ಕಾಣುತ್ತಾನೆಂದರೆ ಊಟ ಮಾಡದ ಮಗು ಕೂಡಾ ಅವನ ಆ ಚಂದಕ್ಕೆ ಅಳು ನಿಲ್ಲಿಸಿ ಊಟ ಮಾಡುತ್ತದೆ.ಹೀಗಿರುವಾಗ ನಮಗೆ ಚಂದಾಮಾಮಾ ಇನ್ನೂ ಹತ್ತಿರ ಆದಾಗ ಅದರ ಸೊಬಗೆ ಬೇರೆ ....!
                         ಶನಿವಾರ ಹುಣ್ಣಿಮೆ ದಿನ ಚಂದಾಮಾಮಾ ಭೂಮಿಗೆ ಹತ್ತಿರ ಬಂದಾಗ ಅವನ ಸೊಬಗು ಇನ್ನಷ್ಟು ಇಮ್ಮಡಿ ಆದ ಹಾಗೆ ಅನಿಸಿತು.ಅದರ ಸೊಬಗನ್ನು ಸವಿದವರೇ ಹೆಚ್ಚು."ಸುಪರ್ ಮೂನ್" ಸುಪರ್ .ಸುಪರ್ ಮೂನ್ ಒಮ್ಮೆ ಮೂಡಿ ಇತಿಹಾಸಕ್ಕೆ ಸೇರಿತು.
                ಚಂದಾಮಾಮಾ ಭೂಮಿಯಿಂದ 3 .56577 ಲಕ್ಷ ಕಿ.ಮೀ ದೂರ ಇದ್ದ (ಸಾಮಾನ್ಯವಾಗಿ 3 .084 ಲಕ್ಷ ಕಿ ಮೀ ದೂರ ಇರುತ್ತಾನೆ.)ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.ಅಂಡಾಕಾರದ ಚಂದ್ರ ಭೂಮಿಅತಿ ಹತ್ತಿರ ಬಂದು ಪೂರ್ಣಿಮೆಯನ್ನು ಒಂದು ಸುಂದರ ಬೆಳ೦ದಿಗಳಾಗಿಸಿ ಬೆಳಗಿಸಿದ್ದಾನೆ.
                       ಸುಪರ್ ಚಂದಾಮಾಮಾ ಬಂದಾಗ ಕೆಲವರಿಗೆ ಕಾತರ ,ಕೆಲವರಿಗೆ ಸ್ವರ್ಗ ಅಂಗೈಯಲ್ಲಿ ಸಿಕ್ಕ ಹಾಗೆ ಕುಣಿದು ಕುಪ್ಪಳಿಸಿದರು.ಭಯ ದುಗುಡ ಇದ್ದವರು ನಿರಾಳ ಉಸಿರನ್ನು ತೆಗೆದುಕೊಂಡರು.ಏಕೆಂದರೆ ಸುನಾಮಿ,ಭೂಕಂಪದಂಥ ಬೀಕರ
ಘಟನೆ ನಡಿಯುತ್ತದೆ ಎಂಬ ನಂಬಿಕೆ ಅವರದ್ದಾಗಿತ್ತು.ಚಂದಮಾಮಾ ಅದನ್ನೆಲ್ಲ ಹುಸಿಗೊಳಿಸಿದ್ದಾನೆ.
                   ಇಂಥ ಅಪರೂಪದ ಘಟನೆ ನಡೆಯುವ ಸಮಯದಲ್ಲಿ ಏನೇನೂ ಅಪವಾದವನ್ನು ಹುಟ್ಟಿಸಿ ಅದರ ಸೊಬಗನ್ನು ಮರೆಮಾಚಬಾರದು.ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಇಂಥ ಘಟನೆ ನೋಡಿ ಆನಂದಿಸಬೇಕು.ಚಂದಾಮಾಮ ಮತ್ತಿ ಬರಲಿ.
               
     "ಕಂದಮ್ಮಾ ಕರೆಯುವ ಚಂದಿರ ಮತ್ತೆ ಬರಲಿ...."
            

Wednesday, 6 April 2011

ಪರಿಸರ ಪ್ರೇಮಿ ಪಂಡಿತ ಮುಂಜಿ

       ಸಸ್ಯಂ ರಮ್ಯಂ ಸುಂದರಂ ಉಕ್ತಿಗೆ ಹಿಂದಿನ ಕಾಲದ ಪರಿಸರಕ್ಕೆ ಅನ್ವಯವಾಗುತ್ತಿತ್ತು .ಕಾಲಕಾಲಕ್ಕೆ    ಕಾಡು ಕ್ಷೀಣಿಸುತ್ತಿದೆ. ಇದರಿಂದ ಮುಂದೆ ಆಮ್ಲಜನಕದ ಬ್ಯಾಗನ್ನು ಹಿಡಿದು ನಡೆಯಬೇಕಾಗಬಹುದು ....!!
 ಪರಿಸರದ ಸಂರಕ್ಷಣೆ , ನಮ್ಮೆಲ್ಲರ ಹೊಣೆ  ಎಂಬ ದೋರಣೆ ಹೊತ್ತು ಹೊರಟಕ್ಕೆ ನಿಂತವರು ಪರಿಸರ ಪ್ರೇಮಿ ಶ್ರೀ ಪಂಡಿತ ಮುಂಜಿ.
                                        
         ಕಾಕ್ಟುಸ ಗಿಡ ಬೆಳೆಸುವುದರಲ್ಲಿ ಮೂರೂ ಬಾರಿಗಿನ್ನಿಸ್ ದಾಖಲೆ ಮಾಡಿದವರು ಶ್ರೀ ಪಂಡಿತ ಮುಂಜಿ.2001 ರಲ್ಲಿ  ಸಿರಸ್ ಜಾತಿಯ ಕಾಕ್ಟುಸನ್ನು 50  ಅಡಿ ಬೆಳೆದು ಗಿನ್ನಿಸ ದಾಖಲೆ ಮಾಡಿದ್ದಾರೆ. ಮರುವಷಾ೯ 60 ಅಡಿ ಬೆಳೆದು  ಗಿನ್ನಿಸ್ ದಾಖಲೇ ಮಾಡಿದರು .2004 ರಲ್ಲಿ 70 ಅಡಿ ಕಾಕ್ಟುಸ್ ಬೆಳೆದು ಮತ್ತೊಮ್ಮೆ ಗಿನ್ನಿಸ್ ದಾಖಲಿಸಿದರು.
            ಏನು ಯೋಚನೆ ಮಾಡುತ್ತಿದ್ದಿರ .........?? ಪಂಡಿತ ಅವರು ಬರೆ ಕಳ್ಳಿಗಿಡಗಳನ್ನೂ ಬೆಳೆಯುತ್ತಾರೆ ಎಂದು ಅಂದುಕೊಂಡಿರ ....?  ಪುಟ್ಟ ಕಾಡಿನ ಪ್ರಕೃತಿ ಮದ್ಯೆ  ಇವರ ಮನೆ ಇದೆ.ನಾನಾ ತರಹದ ಗಿಡ ಬಳ್ಳಿಗಳನ್ನು ಇವರ
ಮನೆ ಸುತ್ತ ಮುತ್ತ ನೋಡಬಹುದು.
                    ಇವರು ವಿಶೇಷ ವನವನ್ನು  ನಿಮಿ೯ಸಿದ್ದಾರೆ .  ಅದುವೇ  "ನವಗ್ರಹ ವನ"  ನವದೆವತೆಗಳು  ಹೊಂದಿರುವ    ವೃಕ್ಷಗಳನ್ನು ಇಲ್ಲಿ ಅವರು ಬೆಳೆಸಿದ್ದಾರೆ.  ಬುದನಿಗೆ ಉತ್ತರಾಣಿ,ಶುಕ್ರನಿಗೆ ಅತ್ತಿಮರ,ಚಂದ್ರನಿಗೆ ಮುತ್ತಲು,ಮಂಗಳಕ್ಕೆ 
ಕದರ ವೃಕ್ಷ ,ರವಿಗೆ ಬಿಳಿಎಕ್ಕ ,ಗುರುವಿಗೆ ಅಶ್ವಥ ವೃಕ್ಷ, ಕೇತುಗೆ ದಬೆ೯,ಶನಿಗೆ ಬನ್ನಿವೃಕ್ಷ,ರಾಹುಗೆ  ಕರಿಕೆ ಹೀಗೆ ಒಂಭತ್ತು
 ಗ್ರಹಗಳಿಗೆ ಒಂಭತ್ತು  ವೃಕ್ಷಗಳಿವೆ .
        
         



"ಪ್ರಕೃತಿ ಯಾವಾಗಲು ನಮಗೆ



ಒಳ್ಳೆಯವಾತಾವರನಕೊಡುತ್ತಿದೆ . ಹಿಂದಿನ ಕಾಲದಲ್ಲಿ ಹಿರಿಯರುವೃಕ್ಷಗಳನ್ನು ಸುತ್ತು ಹಾಕಿ ರೋಗ ಮಾಯವಾಗುತ್ತದೆ,ನವಗ್ರಹ ದೇವತೆಗಳು ನಮ್ಮನ್ನು ರಕ್ಷಿಸುತ್ತಾರೆ                      
    ಎಂದು ಹೇಳುತ್ತಿದ್ದರು.ಏಕೆಂದರೆ ನವಗ್ರಹ ದೇವತೆಗಳು  ವೃಕ್ಷದ ರೂಪದಲ್ಲಿ ನಮಗೆ ಜೀವ ದಾನ ಮಾಡುತ್ತಿರುತ್ತಾರೆ
ಎಂದು ಪರಿಸರ ಪ್ರೇಮಿ ಪಂಡಿತ ಮುಂಜಿ ಹೇಳುತ್ತಾರೆ .
                  ಸವ೯ಜನಿಕ ಉದ್ಯಾನವನ ದಲ್ಲಿ ತಾವೇ ದುಡಿದು ಸುಂದರವಾಗಿ ನಿಮಿ೯ಸಿದ್ದಾರೆ.ಅಪರೂಪದ ರುದ್ರಾಕ್ಷಿ ಗಿಡಗಳಂಥ
ಅನೇಕ ಗಿಡಗಳನ್ನು ತಂದು ನೆಟ್ಟು ,ರಕ್ಷಿಸುವ ಕೆಲಸವನ್ನು ಸ್ವ ಇಚ್ಛೆಯಿಂದ ಮಾಡುತ್ತಾರೆ.ಪರಿಸರ ರಕ್ಷಣೆ ಬಗ್ಗೆ ಬಿತ್ತಿಚಿತ್ರಗಳ ಮೂಲಕ   ಜನರಲ್ಲಿ ಶಿಕ್ಷಣ ನೀಡುತ್ತಾರೆ.

            ಗಿನ್ನಿಸ್ ಕಾಕ್ಟುಸ್ ವೀರ,ರಾಷ್ರಿಯ ಸಾಂಸ್ಕೃತಿಕ ಅಕಾಡಮಿ ಪ್ರಶಸ್ತಿ ,ಡಾ.ಎ ಪಿ ಜೆ ಅಬ್ದುಲ್ ಕಲಾಂ ರಾಷ್ರಿಯ ಪ್ರಶಸ್ತಿಗಳನ್ನು ,ಅನೇಕ ಪ್ರಶಸ್ತಿಗಳನ್ನು ತಮ್ಮ ತೆಕ್ಕೆಗೆ ಬಚಿಕೊಂಡಿದ್ದರೆ. ಇಷ್ಟೆಲ್ಲಾ ಸಾದನೆ ಮಾಡಿದ ಇವರನ್ನು ಗುರುತಿಸುವುದು ನಮ್ಮ ಕತ೯ವ್ಯ .
 ತನು ಮನ  ಧನದಿಂದ ನಾವು ಅವರೊಂದಿಗೆ  ಪರಿಸರ ರಕ್ಷಣೆಗೆ ನಿಲ್ಲೋಣ.