Saturday, 21 May 2011

ಹಣ್ಣುಗಳ ರಾಜ ಮಾವು.....

     ಹಣ್ಣುಗಳರಾಜ ಮಾವಿಗೆ ಸ್ವಾಗತ ....ಬೇಸಿಗೆ ಬಂತುಅಂದರೆ ಮಾವಿನ ಹಣ್ಣಿನ ಬರುವಿಕೆಗಾಗಿ ಕಾಯುತ್ತಿರುತ್ತೇವೆ.ಮಾವು  ಎಂದಾ ಕ್ಷಣ  ಮಾವಿನ ರೂಪ,ಅದರ ಸ್ವಾದ ನೆನಪಾಗಿ  ಬಾಯಲ್ಲಿ ನೀರು ಬರುತ್ತದೆ.ಮಾವಿನ ಹಣ್ಣಿನಲ್ಲಿ ಅನೇಕ ವಿಧಗಳು ತೋತಾಪುರಿ,ಕಾಡುಮಾವು,ಬಾದಾಮಿ,ಗೋವಿನಮಾವಿನ ಹಣ್ಣು ಹೀಗೆ.ಮಾವಿನ ಮಿಡಿ ಯಿಂದ  ಗೊರಟೆ ವರಗೂ ವಿವಿದ ಅಡುಗೆಗಳನ್ನೂ,ಉಪ್ಪಿನಕಾಯಿಗಳನ್ನು ಮಾಡುತ್ತಾರೆ.ಮಾವು ಬಂತೆಂದರೆ ಸಾಕು ಮಹಿಳೆಯರಿಗೆ ಸುಗ್ಗಿಯೂ ಸುಗ್ಗಿ.ಮಕ್ಕಳಿಗೆ ಅದನ್ನು ತಿನ್ನುವ ಕಾತರ.ವಯೂವೃದ್ದರಿಗೆ ಮಾವಿನ ತಿಂಡಿಗಳನ್ನು ತಿನ್ನುವ ನಿರಿಕ್ಷೇ.....

ಹಣ್ಣುಗಳ ರಾಜ ಮಾವು

         ಮಾರುಕಟ್ಟೆಯಲ್ಲಿ ಮಾವುಗಳ ಬೆಲೆ ಗಗನಚುಂಬಿ ಆದರೂ ಮಾವಿನ ಅಭಿಮಾನಿಗಳು ಕಡಮೆ ಆಗಿಲ್ಲ.ತನ್ನ ಸ್ವಾದದಿಂದ ಎಲ್ಲರನ್ನು ಬರಮಾಡಿಕೊಳ್ಳುತ್ತಿದೆ.ಮಾವಿನ ಬರುವಿಕೆಯಿಂದ ಅನೇಕ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ.ಹಣ್ಣುಗಳ ಮಾರಾಟದಿಂದ,ಕೆಲವು ಮಹಿಳೆಯರು ಉಪ್ಪಿನ ಕಾಯಿ ಹಾಕಿ ಮಾರಾಟ ಮಾಡುತ್ತಾರೆ.ಮಾಜ,ಮಾಗಳಂಥ ಜ್ಯೂಸ್
 ಕಂಪನಿಗಳಿಗೆ ಸುಗ್ಗಿ.ಹೀಗೆ ಮಾವಿನ ರಾಜನ ಆಗಮನದಿಂದ  ಎಲ್ಲಡೆ ಸಂತೋಷ ಸಂಭ್ರಮ.  
           


Wednesday, 18 May 2011

ಯಾರು ಬುದ್ದಿವಂತರಲ್ಲ..........ಯಾರು ದಡ್ಡರಲ್ಲ ..............

     ಮಾನವ ಕುಲದಲ್ಲಿ ಬೇರೆಬೇರೆ ರೂಪ ಗುಣ ಹೊಂದಿದ ಮಾನವರು ಇರುತ್ತಾರೆ.ತಮ್ಮದೇ ಗುಣ ,ಧರ್ಮ, ಸಂಸ್ಕೃತಿಯನ್ನು ಹೊಂದಿರುತ್ತಾರೆ.ತಮ್ಮದೇ ಆದ ಬುದ್ದಿಮತ್ತೆಯನ್ನು ಹೊಂದಿರುತ್ತಾರೆ.ಯಾರು ಬುದ್ದಿವಂತರಲ್ಲ,ಯಾರು ದಡ್ಡರಲ್ಲ ಎಂಬುದು ತಿಳಿಯಬೇಕು.ಏಕೆಂದರೆ ಬುದ್ದಿವಂತರೆನಿಸಿ ಕೊಂಡವರು ಕೆಲವು ವಿಷಯಗಳಲ್ಲಿ ದಡ್ದರಿರುತ್ತಾರೆ.ದಡ್ದರೆನಿಸಿ ಕೊಂಡವರು ದಡ್ಡರೆ ಇರುತ್ತಾರೆ ಎಂಬುದಕ್ಕೆ ಸಾದ್ಯವಿಲ್ಲ.
      ಬುದ್ದಿವಂತರೆನಿಸಿ ಕೊಂಡವರು ಅಥವಾ ಅಂತಸ್ತನ್ನು ಹೊಂದಿದವರು ಏನು ಮಾಡಿದರು ಸಮಾಜಕ್ಕೆ ಕ್ಷಮಿಸುವ ಗುಣ ಹೊಂದಿದೆ.ಅದೇ ಅಂತಸ್ತನ್ನು ಹೊಂದಿರದ ಬುದ್ದಿವಂತರೆನಿಸಿ ಕೊಳ್ಳದವರು.ಸಣ್ಣ ತಪ್ಪು ಮಾಡಿದರೂ ಅವರಿಗೆ ಬೈಗುಳ ತಪ್ಪಿದಲ್ಲ.ದೊಡ್ಡದಾಗಿ  ಮಾಡುತ್ತಾರೆ.ಇದು ಸರಿಯೇ....?
         ಇದೇ ಭಾವನೆ  ಶಿಕ್ಷಕರು ಅನುಕರಿಸಿದರೆ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವರಾರು...? 
ನಾನು ಎಲ್ಲ ಶಿಕ್ಷಕರಿಗೆ  ಅನ್ವಯಿಸುತ್ತಿಲ್ಲ. ಕೆಲವರು ಈ ಪದ್ದತಿಯನ್ನು ಅನುಸರಿಸುತ್ತಾರೆ.ನಾನು ಹೇಳುವುದು ಇಷ್ಟೇ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನೂ ಪ್ರೋತ್ಸಾಹಿಸುವಂತಾಗಲಿ.ಅವರಿಗೆ ಮಾರ್ಗದರ್ಶನ ನೀಡಬೇಕು.ಪ್ರತಿಭೆ ಪ್ರದರ್ಶಿಸುವ ವಿದ್ಯಾರ್ಥಿಗಳಿಗೆ ಮಾತ್ರ ಗಮನ ನೀಡದೆ ಪ್ರತಿಭೆ ಹೊರ ಹಾಕಲು ಹಿಂದೇಟು ಹಾಕುವ,ವೇದಿಕೆ ಸಿಗದ ಮಕ್ಕಳಿಗೆ ಶಿಕ್ಷಕರು ಹೆಚ್ಚು ಗಮನ ನಿಡುವಂತಾಗಲಿ....ಎಂಬುವ  ಪ್ರಾರ್ಥನೆ ಮನದಲ್ಲಿ


           
           

Sunday, 8 May 2011

ಅಕ್ಷಯ ತೃತೀಯ .......

               ಅಕ್ಷಯ ತೃತೀಯ,ಬಂಗಾರದ ಹಬ್ಬ.ಬಸವ ಜಯಂತಿ ನಂತರ ಅಥವಾ ಕೆಲವಮ್ಮೆ ಜೊತೆ ಜೊತೆಯಾಗಿ ಬರುವ ಹಬ್ಬ.ಅಕ್ಷಯ ತೃತೀಯ,ಹೆಸರೇ ಸೂಚಿಸಿದಂತೆ 'ನ ಕ್ಷಯ:'-ಅಕ್ಷಯ:.     ಅಕ್ಷಯ ತೃತೀಯ ದಿನ ಬಂಗಾರ ಖರೀದಿಸಿದರೆ ವರ್ಷ ಪೂರ್ತಿ  ಆಗಾಗ ಬಂಗಾರ ಖರೀದಿಸುತ್ತೇವೆ ಅಥವಾ ಬಂಗಾರ ಶಾಶ್ವತವಾಗಿ ನಮ್ಮ ಜೊತೆ ಇರುತ್ತದೆ ಎಂಬ ಜನರಿಗೆ ನಂಬಿಕೆ.ಆದ್ದರಿಂದ ನಂಬಿಕೆ ಉಳ್ಳವರು ಆ ದಿನ ಬಂಗಾರ ಮನೆಗೆ ತರುತ್ತಾರೆ.
     
             ನಮ್ಮ ಹಿಂದು ಧರ್ಮದಲ್ಲಿ ಅನೇಕ ಹಬ್ಬಗಳು ಇವೆ.ಎಲ್ಲ ಹಬ್ಬಗಳಿಗೂ ತಮ್ಮದೇ ಆದ ವಿಶೇಷ ಮಹತ್ವ ಹೊಂದಿವೆ.
ವೈಶಾಖ ಶುಕ್ಲ ತೃತಿಯಾದಂದು ಎಲ್ಲ ಬಂಗಾರದ ಅಂಗಡಿಗಳಲ್ಲಿ  ಜನಸಂದಣಿ.ನಾನಾ ವಿನ್ಯಾಸದ ಬಂಗಾರದ ಆಭರಣಗಳನ್ನು ಕಾಣುತ್ತೇವೆ.ರಿಯಾಯತಿ ದರದಲ್ಲಿ

Tuesday, 3 May 2011

ಜಗಜ್ಯೋತಿ ಬಸವೇಶ್ವರ

               ಜಗಜ್ಯೋತಿ ಬಸವೇಶ್ವರರು  ಕ್ರಿ.ಶ 1131 ರಂದು ಸುಮುರ್ತದಂದು ಜನನ ಹೊಂದಿದರು.
ಬಿಜಾಪುರ ಜಿಲ್ಲೆಯ ಬಾಗೇವಾಡಿ ಎಂಬ ಚಿಕ್ಕ ಗ್ರಾಮ ಇವರ ಜನ್ಮಸ್ಥಳ.
ಮಾದರಸ ,ಮಾದಲಾ೦ಬಿಕೆ ದಂಪತಿಗಳ ಮುದ್ದಿನ ರತ್ನ .
ದಂಪತಿಗಳು ನಂದೀಶ್ವರನ ಭಕ್ತರು.ಅವನ ದಯದಿಂದ
ಹುಟ್ಟಿದ ಮಗು ಎಂಬುವುದಕ್ಕೆ "ಬಸವ" ಎಂದು ನಾಮಕರಣ ಮಾಡಿದರು.
          "ನುಡಿದರೆ ಮುತ್ತಿನಹಾರದಂತಿರಬೇಕು"  
ವಚನದಿಂದ ನಮ್ಮ ನುಡಿ ಹೇಗಿರಬೇಕು ಎಂಬುದನ್ನು ತಿಳಿಸಿ
ಕೊಟ್ಟವರು ಬಸವಣ್ಣನವರು. ತಮ್ಮ ವಚನಗಳಿಂದ.ಜನರ ಜೀವನ ಶೈಲಿ ಹೇಗೆ ಇರಬೇಕು ಎಂದು ತಿಳಿಸಿದವರು.
ಹಾಗೆ ಸಾಮಾಜಿಕ ಪಿಡುಗುಗಳನ್ನುಹೊಡೆದುಓಡಿಸಲುಶ್ರಮಿಸಿದವರು
ಸ್ವತಃ ಬ್ರಾಹ್ಮಣ ಎನಿಸಿಕೊಂಡರು ವೀರಶೈವ ಧರ್ಮವನ್ನು ಸಂಸ್ಥಾಪಿಸಿದರು.
ವಿಶ್ವಗುರು ಬಸವೇಶ್ವರರ ಜಯಂತಿ ಮೇ 6ರಂದು ನಡೆಯಲಿದೆ.ಎಲ್ಲರಿಗು ಬಸವಜಯಂತಿ ಶುಭಾಶಯಗಳು.

Monday, 2 May 2011

ಟೀಚರ : ಗುಂಡ ನಿನಗೆ ಯಾವ ಪ್ರಾಣಿ ಇಷ್ಟ ......?

ಗುಂಡ : ನನಗೆ ಬೆಕ್ಕು ಅಂದರೆ ಬಹಳ ಇಷ್ಟ ....

ಟೀಚರ : ಏಕೆ ?  ನಿನಗೆ ಬೆಕ್ಕು ಅಂದರೆ ಬಹಳ ಇಷ್ಟ ?

 ಗುಂಡ:  ಏಕೆಂದರೆ  ನಾನು ಶಾಲೆಗೆ ಬರಬೇಕಾದರೆ   ಬೆಕ್ಕು ಅಡ್ಡ ಬಂದಾಗ,
                  ಅಜ್ಜಿ ಶಾಲೆಗೆ ಹೋಗಬೇಡ ಎಂದು ಹೇಳುತ್ತಾಳೆ ಅದ್ದಕ್ಕೆನನಗೆ ಬೆಕ್ಕು ಅಂದರೆ ಬಹಳ ಇಷ್ಟ.