ರಾಗಿ,ಸಜ್ಜೆ,ನವಣೆ,ಹಾರಕ,ಬರಗ,ಭತ್ತ,ಗೋಧಿ,ಜೋಳ ಇವು ಸಿರಿಧಾನ್ಯಗಳು. ನಾವು ಭತ್ತ,ಗೋಧಿಯನ್ನು ಬಹಳ ಉಪಯೋಗಿಸುತ್ತೇವೆ.ಹಬ್ಬ ಹರಿದಿನಗಳಲ್ಲಿ ಸಜ್ಜೆ ,ರಾಗಿ ಉಪಯೋಗಿಸುತ್ತೇವೆ.ಆದರೆ ಹಾರಕ,ಬರಗ, ಉದಲು ಬಳಸಿರಲಿಲ್ಲ.ಮಂಗಳವಾರ ಸಿರಿ ಆಹಾರ ಮೇಳದಲ್ಲಿ ಭಾಗವಹಿಸಿದ್ದಕ್ಕೆ ಇವುಗಳ ಮಹತ್ವ ತಿಳಿದಿದೆ.
ನಾನು ಆಹಾರ ಮೇಳದಲ್ಲಿ ಸವಿದ ಸವಿ ಅದ್ಭುತ. ರಾಗಿ ,ಸಜ್ಜೆ ,ಹಾರಕ ಕೂಡಾ ಒಂದು ಪೌಷ್ಟಿಕ ಆಹಾರಗಳು.ನಮ್ಮ ಮನೆಗಳಲ್ಲಿ ಎಳ್ಳು ಅಮಾವಾಸ್ಯಯಂದು ಸಜ್ಜೆ ರೊಟ್ಟಿ ಮಾಡುತ್ತಾರೆ. ಹಾಗೆ ಬಯಕೆ ಬುತ್ತಿ ಕಟ್ಟಲು ಅಂದರೆ ಸೀಮಂತ ಕಾರ್ಯಕ್ರಮ (ಸಿರಿ ಕಾರಣ)ಕ್ಕೆ ಬುತ್ತಿ ಒಯ್ಯಲು ನವಣೆ ಹೊಳಿಗೆ ಮಾಡುವ ಪದ್ಧತಿ ಇದೆ. ಇಂಥ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಅಡುಗೆ ತಿಂದಿದ್ದೇವೆ.ಆದರೆ ಇವುಗಳನ್ನು ದಿನ ಬಳಕೆ ಮಾಡಬೇಕಾಗಿದೆ.ನಾನು ರವಿವಾರಕ್ಕೊಮ್ಮೆ ಆದರೂ ಪುಸ್ತಕದಲ್ಲಿರುವ ಅಡುಗೆ ಮಾಡಿ ತಿನ್ನಬೇಕು ಎಂದು ಅಂದುಕೊಂಡಿದ್ದೇನೆ.
No comments:
Post a Comment