Tuesday, 21 June 2011

ಜೀವದಾನ ಮಾಡುವ ಪರಿಸರ

                                ಸಮುದ್ರ ವಸನೆದೇವಿ ಪರ್ವತಸ್ತನ ಮಂಡಲೆ |
                              ವಿಷ್ಣುಪತ್ನಿನಮಸ್ತುಭ್ಯಮ್ ಪಾದಸ್ಪರ್ಶಮ್ ಕ್ಷಮಸ್ವಮೇ||

   ಎಂದು ನಮ್ಮ ಪರಂಪರೆಯಲ್ಲಿ ಬೆಳಿಗ್ಗೆ ಏದ್ದು ಭೂಸ್ಪರ್ಶ ಮಾಡುವ ಮುನ್ನ ಈ ಶ್ಲೋಕವನ್ನು ಹೇಳುತ್ತೇವೆ.ಅದು ಜೀವದಾನ ಮಾಡುವ ಪರಿಸರವನ್ನು ಹೊತ್ತು ನಿಂತ ಮಹಾತಾಯಿಗೆ.ನಮ್ಮನ್ನು ಈ ಪರಿಸರ ರಕ್ಷಿಸಿ ಪೋಷಿಸುತ್ತದೆ.ಅಂಥ ಪರಿಸರಕ್ಕೆ ನಾವು ಕೃತಜ್ಞರಾಗಿರಬೇಕು.ಆದರೆ ನಾವು ಕೃತಘ್ನರಾಗಿದ್ದೇವೆ.

    ಪ್ಲಾಷ್ಟಿಕ್ ನಂಥ ಭೂಮಿಯಲ್ಲಿ ಕರಗದ ವಸ್ತುಗಳನ್ನು ಉಪಯೋಗಿಸಿ ಭೂ ಮಾಲಿನ್ಯ ಮಾಡುತ್ತಿದ್ದೇವೆ.ಇದರಿಂದ ಪಶುಪಕ್ಷಿಗಳಿಗೆ ಮಾರಕವಾಗಿದೆ. ನಾವು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುತ್ತೇವೆ.ಆದರೆ ಎನೂ ತಪ್ಪು ಮಾಡದ ಆ ಮುಗ್ದ ಪ್ರಾಣಿಗಳಿಗೆ ನಾವು ಕೊಟ್ಟ ಹಿಂಸೆ ಎನ್ನಬಹುದು.

Sunday, 19 June 2011

ಮೈತ್ರೇಯಿ ಗುರುಕುಲಮ್

 (ನಮ್ಮ ಗುರುಕುಲ)
     ಹಿಂದಿನ ಕಾಲದಲ್ಲಿ ರಾಜರುಗಳು, ಅರ್ಹ ವಿದ್ಯಾರ್ಥಿಗಳು ಗುರುಕುಲಗಳಲ್ಲಿ ಕಲಿಯುತ್ತಿದ್ದರು.ಗುರುಕುಲ ಅಂದರೆ ಗುರುಗಳ ಆಶ್ರಮಕ್ಕೆ ಹೋಗಿ ವಿದ್ಯಾರ್ಥಿಗಳು ಕಲಿಯುತ್ತಿದ್ದರು.ಗುರುಗಳ ಜೊತೆ ವಾಸವಾಗಿದ್ದು ಅವರ ಸೇವೆ ಮಾಡುತ್ತಾ ವಿದ್ಯೆ ಕಲಿಯಬೇಕಾಗಿತ್ತು.ಗುರುಗಳು ಶಿಷ್ಯರನ್ನು ಪರಿಕ್ಷೀಸಿ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಬೋಧನೆ ಮಾಡುತ್ತಿದ್ದರು.ಅಂತಹ ಗುರುಕುಲವೇ ನಮ್ಮ ಮೈತ್ರೇಯಿ ಗುರುಕುಲಮ್.

        ದಕ್ಷಿಣಕನ್ನಡದ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದಿಂದ ಸಾಲೆತ್ತೂರುರಿಗೆ ಹೋಗುವ ಮಾರ್ಗದಲ್ಲಿ ಬರುವ ಮೂರ್ಕಜೆಯಲ್ಲಿದೆ.ನಮ್ಮಗುರುಕುಲ.ಒಂದು ಸುಂದರ ಪ್ರಕೃತಿಯ
ಮಡಿಲಲ್ಲಿದೆ. ಗುರುಕುಲ ಹೋಗುವ ದಾರಿ ಕಾಡು ದಾರಿ.ಪಕ್ಷಿಗಳ ಕಲರವ ಮೈ ನವರುವಂತೆ ಮಾಡುತ್ತದೆ.ಹೊಳೆ ನೀರಿನ ಜುಳು ಜುಳು ನಾದ ಕರ್ಣಾಮೃತವನ್ನು ನೀಡುತ್ತದೆ.ಆಗ ಯುದ್ದದಲ್ಲಿ ಛತ್ರಪತಿ ಮಹಾರಾಜರಿಗೆ ಸಹಾಯ ಮಾಡಿದ ಕಾಡು ಮೂಂಗುಸಿ (ನಮ್ಮಲ್ಲಿ ಮಾತಾಡುತ್ತಿದ್ದರು) ,ಅಲ್ಲಲ್ಲಿ ಕೆಲವೊಮ್ಮೆ ಶಿವನ ಕೊರಳಿನಲ್ಲಿರುವ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ರಾಮನ ಸೇತುವೆಗೆ ಅಳಿಲು ಸೇವೆ ಮಾಡಿದ ಅಳಿಲುಗಳು ಓಡಾಡುತ್ತಿರುತ್ತವೆ. ಆದರೂ ಅಲ್ಲಿಂದ ನಡೆದು ಬರುವುದ್ದಕ್ಕೆ ತುಂಬಾ ಖುಷಿ ಎನಿಸುತ್ತದೆ. ಕಳೆದ ೫ ವರ್ಷದವರೆಗೆ ಇಂಥ ಪ್ರಕೃತಿಯನ್ನು ಅನುಭವ ಕಳೆದುಕೊಂಡಿದ್ದೇನೆ.     

Friday, 17 June 2011

ಭರತನಾಟ್ಯ



       ಭರತನಾಟ್ಯ ವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ.ಭರತ ಮುನಿಯಿಂದ ರಚಿಸಲ್ಪಟ್ಟ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಭರತ ಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರದ ಕೃತಿಯಲ್ಲಿ ಉಲ್ಲೇಖ ಇರುವುದರಿಂದ ಭರತನಾಟ್ಯ ಎಂದು ಕರೆಯಲ್ಪಡುವುದು ಸರಿಯಾದ ಉತ್ತರ ಅಲ್ಲವೇ ಅಲ್ಲ.ಭರತ ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳಿದ್ದರೂ ನಾಟ್ಯ ಎನ್ನುವ ಶಬ್ದದ ಹಿಂದೆ ಸರಿಯಾದ ಅರ್ಥವನ್ನು  ಭರತ ನಾಟ್ಯ ಎನ್ನುವರು. ಭರತನಾಟ್ಯ ಹುಟ್ಟಿದ್ದು ಶಿವನಿಂದ ಎಂಬ ಉಲ್ಲೇಖ ಕೂಡಾ ಇದೆ.

        ಭರತನಾಟ್ಯದಲ್ಲಿ ಅನೇಕ ವಿಧಗಳು,ಶೈಲಿಗಳು  ಇವೆ. ಅವುಗಳು ಕುಚುಪುಡಿ(ತಮಿಳುನಾಡು ), ಓಡಿಸಿ(ಒರಿಸ್ಸಾ), ಮೋಹಿನಿ ಅಟ್ಟಂ(ಕೇರಳ) ಹೀಗೆ ಅನೇಕ ವಿಧಗಳಿವೆ. ಭರತನಾಟ್ಯ ಯೋಗಕ್ಕೆ ಸಮ.  ಭರತನಾಟ್ಯ ಮಾಡಿದರೆ ಯೋಗ ಮಾಡಿದ ಹಾಗೆ.ನಮ್ಮ ದೇಹ ಹೆಚ್ಚು ಚಟುವಟಿಕೆಯಿಂದ ಇರಲು ಸಹಾಯಕವಾಗಿದೆ. ಹಿಂದಿನ ಪರಂಪರೆ ಆದರು ಇನ್ನೂ ಜನಪ್ರಿಯತೆ ಹೊಂದಿರುವ ಕಲೆ.
      
      ಯುವ ಜನತೆ ಇಗಲೂ  ಭರತನಾಟ್ಯ  ಕಲಿಯಲು ಉತ್ಸುಕರಾಗಿದ್ದಾರೆ. ಹಾಗೆ ಕೆಲವು ವಿಶ್ವ ವಿದ್ಯಾಲಯಗಳು ಭರತನಾಟ್ಯದ  ಕೋರ್ಸುಗಳನ್ನು ಹೊಂದಿವೆ. ನಮ್ಮ ಧಾರವಾಡದಲ್ಲಿ  ಅನೇಕ ಭರತನಾಟ್ಯ ಕಲಾವಿದರು  ,ವಿದ್ವಾಂಸರು ಇದ್ದಾರೆ.

Wednesday, 15 June 2011

ಅರೋಗ್ಯ ಸಿರಿಯನ್ನು ನೀಡುವ ಸಿರಿಧಾನ್ಯಗಳು

    ರಾಗಿ,ಸಜ್ಜೆ,ನವಣೆ,ಹಾರಕ,ಬರಗ,ಭತ್ತ,ಗೋಧಿ,ಜೋಳ ಇವು ಸಿರಿಧಾನ್ಯಗಳು. ನಾವು ಭತ್ತ,ಗೋಧಿಯನ್ನು ಬಹಳ ಉಪಯೋಗಿಸುತ್ತೇವೆ.ಹಬ್ಬ ಹರಿದಿನಗಳಲ್ಲಿ ಸಜ್ಜೆ ,ರಾಗಿ ಉಪಯೋಗಿಸುತ್ತೇವೆ.ಆದರೆ   ಹಾರಕ,ಬರಗ, ಉದಲು ಬಳಸಿರಲಿಲ್ಲ.ಮಂಗಳವಾರ ಸಿರಿ ಆಹಾರ ಮೇಳದಲ್ಲಿ ಭಾಗವಹಿಸಿದ್ದಕ್ಕೆ ಇವುಗಳ ಮಹತ್ವ ತಿಳಿದಿದೆ.
      ನಾನು ಆಹಾರ ಮೇಳದಲ್ಲಿ ಸವಿದ ಸವಿ ಅದ್ಭುತ. ರಾಗಿ ,ಸಜ್ಜೆ ,ಹಾರಕ ಕೂಡಾ ಒಂದು ಪೌಷ್ಟಿಕ ಆಹಾರಗಳು.ನಮ್ಮ ಮನೆಗಳಲ್ಲಿ ಎಳ್ಳು ಅಮಾವಾಸ್ಯಯಂದು ಸಜ್ಜೆ ರೊಟ್ಟಿ ಮಾಡುತ್ತಾರೆ. ಹಾಗೆ ಬಯಕೆ ಬುತ್ತಿ ಕಟ್ಟಲು ಅಂದರೆ ಸೀಮಂತ ಕಾರ್ಯಕ್ರಮ (ಸಿರಿ ಕಾರಣ)ಕ್ಕೆ ಬುತ್ತಿ ಒಯ್ಯಲು ನವಣೆ ಹೊಳಿಗೆ ಮಾಡುವ ಪದ್ಧತಿ ಇದೆ. ಇಂಥ ಕಾರ್ಯಕ್ರಮದಲ್ಲಿ  ಸಿರಿಧಾನ್ಯಗಳ ಅಡುಗೆ ತಿಂದಿದ್ದೇವೆ.ಆದರೆ ಇವುಗಳನ್ನು ದಿನ ಬಳಕೆ ಮಾಡಬೇಕಾಗಿದೆ.ನಾನು ರವಿವಾರಕ್ಕೊಮ್ಮೆ ಆದರೂ ಪುಸ್ತಕದಲ್ಲಿರುವ ಅಡುಗೆ ಮಾಡಿ ತಿನ್ನಬೇಕು ಎಂದು ಅಂದುಕೊಂಡಿದ್ದೇನೆ.

Monday, 13 June 2011

ಎಲೆಗಳು ಏಕೆ ಹಸಿರಾಗಿರುತ್ತವೆ ?

      ಎಲೆಗಳು ಏಕೆ ಹಸಿರಾಗಿರುತ್ತವೆ ? ಎಂಬ ಪ್ರಶ್ನೆ ನಿಮಗೂ ಮುಡಿರಬೇಕಲ್ಲವೇ? ಇಲ್ಲಿದೆ ಅದಕ್ಕೆ ಉತ್ತರ ==========
    ಎಲೆ ಎಂಬುದು  ಗಿಡದ ಪಾಕಶಾಲೆ. ಎಲೆಯಲ್ಲಿ  ಪತ್ರಹರಿತ್ತು ಎಂಬ ಅಂಗಾಂಶ ಇರುತ್ತದೆ. ಪತ್ರಹರಿತ್ತಿನ ಜೊತೆ ನೀರು, ಸೂರ್ಯನ ಬೆಳಕು ,ಕಾರ್ಬನ ಡೈ ಆಸೈಡ  ಸೇರಿ ಎಲೆಯಲ್ಲಿ ಜೈವಿಕ ಕೀಯೆ ನಡೆಯುತ್ತದೆ.ಆದ್ದರಿಂದ ಎಲೆಗಳು
ಹಸಿರಾಗಿರುತ್ತವೆ.
     ಇದು ಒಂದು ಕಾರಣವಾದರೆ  ಇನ್ನೊಂದು ಕಾರಣ ಸೂರ್ಯನ ಬೆಳಕಿನಲ್ಲಿ ಏಳು ಬಣ್ಣಗಳು ಇರುತ್ತವೆ. ಅದರಲ್ಲಿ ಎಲೆಗಳು ಹಸಿರು ಬಣ್ಣವನ್ನು ಹೀರಿಕೊಂಡು ಪ್ರತಿಬಿಂಬಿಸುತ್ತವೆ.ಹೀಗಾಗಿ ಎಲೆ ಹಸಿರಾಗಿರುತ್ತವೆ.
    ಈ ಪ್ರಶ್ನೆಯನ್ನು ನಮ್ಮ ಗುರುಗಳು  ಕೇಳಿದ್ದು. ನಾನು ನನ್ನ ಸ್ನೇಹಿತೆ
 ಅಮೃತಾ .ಕೆ  ( ಆಯುರ್ವೇದ ವೈದಕೀಯ ಶಿಕ್ಷಣ ಮುಗಿಸಿ  ಇಂಟರ್ ಶಿಪ್ ಮಾಡುತ್ತಿದ್ದಾರೆ.) ಅವಳಿಂದ ತಿಳಿದುಕೊಂಡದ್ದು.ನಮ್ಮ ಗುರುಗಳು ಮತ್ತೆ ಅದನ್ನು ವಿಶ್ಲೇಷಿಸಿ ತಿಳಿಸಿದರು.

Saturday, 11 June 2011

ಮಳೆ ಬಂತು ಮಳೆ .....

     ಮಳೆ ಬಂತು ಮಳೆ .....ಎಂದು ಪುಟಾಣಿಗಳು ಹಾಡುತ್ತಿರುವುದನ್ನು ಕೇಳುತ್ತೇವೆ.ನಮ್ಮ ಜೀವನದಲ್ಲಿ ಮಳೆಯದು ಅದ್ಬುತ ಪಾತ್ರ.ಮಳೆ ನೀರು ಪರಿಶುದ್ಧವಾದುದು.ಈ ಮಳೆಯ ನೀರಿಗಾಗಿ ಜಾತಕಾ ಪಕ್ಷಿ ಬೇರೆ ನೀರುಸಹಿತ ಮುಟ್ಟುವದಿಲ್ಲ.ಹಾಗೆ ನಮ್ಮ ಪಾತ್ರ ಆಗಬಾರದಲ್ಲವೇ? ನಾವು ಮಳೆ ನೀರನ್ನು ಪೂಲು ಮಾಡದೆ ಮಳೆ ನೀರನ್ನು ಶೇಖರಿಸಿದಬೇಕಾಗುತ್ತದೆ.

    ಬೇಸಿಗೆಯಲ್ಲಿ ತುಟ್ಟು ನೀರಿಲ್ಲದೆ ಬಕ-ಬಕ  ಎಂದು ಬಾಯಿ  ಬಿಡಬೇಕಾದ  ಸಂದರ್ಭಗಳು ಎಷ್ಟು  ಸಲ ಬಂದು ಹೋಗಿವೆ. ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಳೆ ಬರುವ ಸಂದರ್ಭದಲ್ಲಿ ಮಳೆ ನೀರನ್ನು ಪೂಲು ಮಾಡುವುದು ಒಳಿತಲ್ಲ. ಮಳೆ ನಿರು ನಮ್ಮ ಮಳಿಗೆಗೆ  ಬಂದು ಬಿಳುವುದರಿಮ್ದ ಅದು ಹರಿದು ಹೋಗುತ್ತದೆ. ಅದನ್ನು ಶೇಖರಿಸಿಟ್ಟರೆ ಬೇಸಿಗೆಯಲ್ಲೂ  ನೀರಿಲ್ಲದೆ ಪರದಾಡುವವರ ಕೈಯಲ್ಲಿ ಮಳೆಗಾಲದ ಮಳೆ ನೀರು ಸಂಜೀವಿನಿ ಇಟ್ಟಂತಾಗುತ್ತದೆ